Register / Enquiry
ಕೆಎಎಸ್ ಪರೀಕ್ಷೆ

ಕೆಎಎಸ್ ಎಂದರೇನು?

ಕೆಎಎಸ್ ಎಂದರೆ ಕರ್ನಾಟಕ ಆಡಳಿತಾತ್ಮಕ ಸೇವೆ, ಇದು ಕರ್ನಾಟಕ ಸರ್ಕಾರಿ ಕಾರ್ಯಗಳನ್ನು ನಿಭಾಯಿಸುವ ನಾಗರೀಕ ಸೇವಕರ ರಾಜ್ಯ ಆಡಳಿತಾತ್ಮಕ ಅಂಗವಾಗಿದೆ. ಸರಳವಾಗಿ, ಅವರು ಕರ್ನಾಟಕ ಸರ್ಕಾರಕ್ಕೆ ಆಡಳಿತ ನಡೆಸಲು ನೆರವಾಗುತ್ತಾರೆ. ಇದು ಉನ್ನತ ಅಧಿಕಾರ ಮತ್ತು ಸವಲತ್ತುಗಳನ್ನು ಹೊಂದಿರುವ ಹುದ್ದೆ. ನಾಗರೀಕ ಸೇವೆಗೆ ಕೊಡುವ ಅನುಕೂಲತೆಗಳಷ್ಟು ಬೇರೆ ಯಾವ ಕ್ಷೇತ್ರಗಳೂ ಕೊಡಲಾರವು. ಇದು ಹಲವರನ್ನು ನಾಗರೀಕ ಸೇವೆಯನ್ನು ಭಾವೀ ಹುದ್ದೆಯಾಗಿ ಆಯ್ದುಕೊಂಡು ಕೆಎಎಸ್ ಪರೀಕ್ಷೆ ಬರೆಯುವಂತೆ ಆಕರ್ಷಿಸುತ್ತದೆ.

ಕೆಎಎಸ್ ಪರೀಕ್ಷೆ ಎಂದರೇನು?

ಕೆಎಎಸ್ ಪರೀಕ್ಷೆ ಎಂದರೆ ಕರ್ನಾಟಕ ಆಡಳಿತಾತ್ಮಕ ಸೇವೆಗೆ ಶ್ರೇಣಿ ಆಧಾರಿತ ನೇಮಕಾತಿ ಪ್ರಕ್ರಿಯೆ.. ಇದು ಆಡಳಿತಾತ್ಮಕ ಸೇವೆಗೆ ಸೂಕ್ತವಾಗಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂರು ಹಂತದ ಪರೀಕ್ಷಾ ಪ್ರಕ್ರಿಯ. ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್’ಸಿ) ಕೆಎಎಸ್ ಪರೀಕ್ಷೆಗಳನ್ನು ನಡೆಸುವ ಆಯೋಗ. ಕೆಎಎಸ್ ಪರೀಕ್ಷೆಯು ಸವಾಲಾಗಿ ಕಂಡರೂ, ಸರಿಯಾದ ಮಾರ್ಗದರ್ಶನದೊಂದಿಗೆ ಇದು ಸರಳ ಪ್ರಕ್ರಿಯೆಯಾಗಿ ಮಾರ್ಪಡುತ್ತದೆ. ಹಾಗಾಗಿ ಹೆಚ್ಚಿನವರು ಕೆಎಎಸ್ ಪರೀಕ್ಷಾ ತಯಾರಿಗೆ ಕೆಎಎಸ್ ತರಬೇತಿ ಕೇಂದ್ರಗಳಿಗೆ ಸೇರುತ್ತಾರೆ.

ಕೆಪಿಎಸ್’ಸಿ ಎಂದರೇನು?

ಕೆಪಿಎಸ್’ಸಿ ಎಂದರೆ ಕರ್ನಾಟಕ ಲೋಕ ಸೇವಾ ಆಯೋಗ (Karnataka Public Service Commission). ಕೆಪಿಎಸ್’ಸಿಯು ರಾಜ್ಯ ಸಂಸ್ಥೆಯಾಗಿದ್ದು, ಇದು ಕರ್ನಾಟಕ ಸರ್ಕಾರದ ನೇಮಕಾತಿ ಪ್ರಕ್ರಿಯೆಯನ್ನು ನಿರ್ವಹಿಸುತ್ತದೆ. ಇದು ರಾಜ್ಯ ಮಟ್ಟದಲ್ಲಿ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಇಲಾಖೆಯ ಪರೀಕ್ಷೆಗಳ (ರಾಜ್ಯ ಸರ್ಕಾರಿ ಪರೀಕ್ಷೆ) ಮೂಲಕ ಅಭ್ಯರ್ಥಿಗಳನ್ನು ನೇಮಕ ಮಾಡುತ್ತದೆ. ಉದಾಹರಣೆಗೆ, ಪ್ರಥಮ ದರ್ಜೆ ಸಹಾಯಕರನ್ನು ನೇಮಕ ಮಾಡಲು ಕೆಪಿಎಸ್’ಸಿ ಕರ್ನಾಟಕ ಎಫ್.ಡಿಎ ಪರೀಕ್ಷೆ ನಡೆಸುತ್ತದೆ. ಹಾಗೆಯೇ ಕೆಎಎಸ್ ಎಂಬುವುದು ಕೆಪಿಎಸ್’ಸಿ ನೇಮಕಾತಿ ಪ್ರಕ್ರಿಯೆಯ ಒಂದು ಭಾಗ.ಕೆಪಿಎಸ್’ಸಿ 13 ಅಧ್ಯಕ್ಷರು, 67 ಸದಸ್ಯರನ್ನು ಹೊಂದಿದ್ದು, ಬೆಂಗಳೂರಿನ ‘ಉದ್ಯೋಗ ಸೌಧ’ದಲ್ಲಿ ಕೆಪಿಎಸ್’ಸಿ ಯ ಕಾರ್ಯ ನಿರ್ವಾಹಕ ಕಚೇರಿ ಇದೆ.

ಕೆಪಿಎಸ್’ಸಿಯ ಇತಿಹಾಸ

ರಾಜ್ಯ ನಾಗರೀಕ ಸೇವೆಗೆ ನೇಮಕಾತಿ ನಡೆಸುವ ಪ್ರಾಧಿಕಾರವನ್ನು ಸ್ಥಾಪಿಸುವ ಕಲ್ಪನೆಯು 1921ರಲ್ಲಿ ಆರಂಭವಾಯಿತು. ಅದು ಮೈಸೂರು ಸರ್ಕಾರವು ರಾಜ್ಯ ಲೋಕ ಸೇವಾ ನೇಮಕಾತಿಯ ಕುರಿತು ಸರ್ಕಾರಕ್ಕೆ ಸಲಹೆ ನೀಡಲು’ಕೇಂದ್ರ ಪ್ರಾಧಿಕಾರ’ವನ್ನು ಸ್ಥಾಪಿಸಿದಾಗ. ಅವರು ಆ ಮಂಡಳಿಗೆ ‘ಕೇಂದ್ರ ನೇಮಕಾತಿ ಮಂಡಳಿ’ ಎಂದು ನಾಮಕರಣ ಮಾಡಿದರು. ಸ್ವಾತಂತ್ರ್ಯಾನಂತರ, ಕರ್ನಾಟಕ ಸರ್ಕಾರವು ಈ ಮಂಡಳಿಯನ್ನು 1951ರಲ್ಲಿ ಪ್ರಸ್ತುತ ‘ಕರ್ನಾಟಕ ಲೋಕ ಸೇವಾ ಆಯೋಗ’ವಾಗಿ ಮರು ನಿರ್ಮಾಣಗೊಳಿಸಿತು.

ಮೊದಲಿನಿಂದಲೂ ಕೆಪಿಎಸ್’ಸಿಯು ‘ಎಲ್ಲಾ ಕೆಪಿಎಸ್’ಸಿ ನೇಮಕಾತಿಗಳು ಕೆಪಿಎಸ್’ಸಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳನ್ನು ಆಧರಿಸಿವೆಯೇ ಹೊರತು ಬೇರೆ ವಿಧಾನಗಳಿಂದ ಅಲ್ಲ’ ಎಂಬ ನಿಯಮವನ್ನು ಅನುಸರಿಸುತ್ತಿದೆ. ಹೀಗಾಗಿ ನಿಮ್ಮ ಕೆಎಎಸ್ ಅಧಿಕಾರಿಯಾಗುವ ಅವಕಾಶವು ಸಂಪೂರ್ಣವಾಗಿ ನಿಮ್ಮ ಕೆಎಎಸ್ ತಯಾರಿಯನ್ನು ಆಧರಿಸಿದೆ.

Get access to question papers!
  Get Questions