Register / Enquiry
ಕೆಎಎಸ್ ಪರೀಕ್ಷೆ

ಕರ್ನಾಟಕ ಆಡಳಿತಾತ್ಮಕ ಸೇವೆಗಳು

ಇದು ಕೆಎಎಸ್ ತಯಾರಿಯ ಆರಂಭದಲ್ಲಿ ಪ್ರತಿಯೊಬ್ಬ ಕೆಎಎಸ್ ಆಕಾಂಕ್ಷಿಯಲ್ಲೂ ಮೂಡುವ ಸಾಮಾನ್ಯ ಪ್ರಶ್ನೆ.

‘ಕೆಎಎಸ್ ಹುದ್ದೆ ಯಾಕಷ್ಟು ಮುಖ್ಯ?ಇದು ಎಲ್ಲಾ ಪ್ರಯತ್ನಗಳಿಗೆ ಯೋಗ್ಯವಾಗಿದೆಯೇ?’

ಹೌದು, ಕೆಎಎಸ್ ಒಂದು ರಾಜ್ಯ ಸರ್ಕಾರಿ ಕೆಲಸಕ್ಕಿಂತ ಎಷ್ಟೋ ಹೆಚ್ಚು!
ಆರಂಭಿಕರಿಗೆ, ಕೆಎಎಸ್ (ಕರ್ನಾಟಕ ಆಡಳಿತಾತ್ಮಕ ಸೇವೆ) ಅಧಿಕಾರಿಗಳು ಕರ್ನಾಟಕದ ಉನ್ನತ ಆಡಳಿತಗಳ ಮುಖ್ಯಸ್ಥರಾಗಿರುತ್ತಾರೆ. ಇದು ನಿಮಗೆ ಸಮಾಜದಲ್ಲಿ ಬದಲಾವಣೆಗಳನ್ನು ತರಬಹುದಾದ ಅಧಿಖಾರವನ್ನು ನೀಡುವ ಶಕ್ತಿಯುತ ಹುದ್ದೆ. ಕೇವಲ ಕೆಎಎಸ್ ಸೇರುವ ಮೂಲಕ ನೀವು ಸಹಜವಾಗಿಯೇ ಗೌರವ ಮತ್ತು ಸ್ಥಾನಮಾನಗಳನ್ನು ಗಳಿಸುತ್ತೀರಿ. ಹಾಗೆಯೇ ನಿಮಗೆ ಭರವಸೆಯುಕ್ತ ವೃತ್ತಿ ಬೆಳವಣಿಗೆ ಹಾಗೂ ಉದ್ಯೋಗ ಸುರಕ್ಷತೆ ಇರುತ್ತದೆ.ಜೊತೆಗೆ ಆಕರ್ಷಕ ಕೆಎಎಸ್ ವೇತನ ಮತ್ತು ಉನ್ನತ ಸರ್ಕಾರಿ ಸವಲತ್ತುಗಳೂ ದೊರಕುತ್ತವೆ. ಕರ್ನಾಟಕ ಆಡಳಿತಾತ್ಮಕ ಸೇವೆಯು (ಕೆಎಎಸ್) ಹಲವರಿಗೆ ಸುಲಭವಾಗಿ ಒಂದು ವೃತ್ತಿ ಆಯ್ಕೆಯಾಗಬಲ್ಲದು.

ಕೆಎಎಸ್ ಅಡಿಯಲ್ಲಿ ಬರುವ ಸೇವೆಗಳು ಯಾವುವು?

ಕೆಪಿಎಸ್’ಸಿಯು ಗುಂಪು ‘ಎ’ ಮತ್ತು ಗುಂಪು ‘ಬಿ’ ಎರಡರ ನೇಮಕಾತಿಗಳಿಗೂ ಪರೀಕ್ಷೆ ನಡೆಸುತ್ತದೆ. ರಾಜ್ಯ ಸಮಿತಿಯು ಅಭ್ಯರ್ಥಿಯು ಕೆಎಎಸ್ ಪರೀಕ್ಷೆಯಲ್ಲಿ ಗಳಿಸಿದ ಶ್ರೇಣಿಯ ಆಧಾರದಲ್ಲಿ ಸೇವೆಗಳನ್ನು ಹಂಚಿಕೆ ಮಾಡುತ್ತದೆ. ಹೀಗಾಗಿ ಕೆಎಎಸ್ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯನ್ನು ಗಳಿಸಿದಷ್ಟು ಕೆಎಎಸ್ ಹುದ್ದೆಯನ್ನು ಅಲಂಕರಿಸುವ ನಿಮ್ಮ ಕನಸು ನನಸಾಗಿಸುವ ಅವಕಾಶ ಹೆಚ್ಚು.

ಗುಂಪು ಎ

  1. ಕರ್ನಾಟಕ ಆಡಳಿತ ಸೇವೆ - ಸಹಾಯಕ ಆಯುಕ್ತ
  2. ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್’ಪಿ)
  3. ಉಪ ನಿರ್ದೇಶಕರು / ಜಿಲ್ಲಾ ಖಜಾನೆ ಅಧಿಕಾರಿ
  4. ಸಹಾಯಕ ಆಯುಕ್ತರು, ವಾಣಿಜ್ಯ ತೆರಿಗೆ
  5. ಉಪ ಕಾರ್ಮಿಕರ ಆಯುಕ್ತರು
  6. ಕಾರ್ಯನಿರ್ವಾಹಕ ಅಧಿಕಾರಿ ಗ್ರಾಮೀಣ / ಉಪ-ಕಾರ್ಯದರ್ಶಿ (ಪಂಚಾಯತ್ ರಾಜ್)
  7. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ

ಗುಂಪು ಬಿ

  1. ತಹಶಿಲ್ದಾರ್, ಕರ್ನಾಟಕ ಆಡಳಿತ ಸೇವೆ
  2. ವಾಣಿಜ್ಯ ತೆರಿಗೆ ಅಧಿಕಾರಿ
  3. ಬಂಧಿಖಾನೆಯ ಸಹಾಯಕ ವರಿಷ್ಠಾಧಿಕಾರಿ
  4. ಅಬಕಾರಿಯ ಉಪ ವರಿಷ್ಠಾಧಿಕಾರಿ (ಅಬಕಾರಿ ಇಲಾಖೆ)
  5. ಸಹಾಯಕ ಖಜಾನೆ ಅಧಿಕಾರಿ
  6. ಸಹಾಯಕ ನಿರ್ದೇಶಕರು ( ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ)
  7. ಸಹಕಾರಿ ಸಂಘಗಳ ಸಹಾಯಕ ರಿಜಿಸ್ಟ್ರಾರ್
  8. ಸಹಾಯಕ ನಿರ್ದೇಶಕರು (ಕೃಷಿ ಮಾರುಕಟ್ಟೆ ಇಲಾಖೆ)
  9. ಸಹಾಯಕ ನಿರ್ದೇಶಕರು (ಸಹಕಾರಿ ಲೆಕ್ಕ ಪರಿಶೋಧನಾ ಇಲಾಖೆ)
  10. ಜಿಲ್ಲಾ ಕಾರ್ಮಿಕ ಅಧಿಕಾರಿ
  11. ಉಪ ನಿರ್ದೇಶಕರು ( ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ)
  12. ಜಿಲ್ಲಾ ಉದ್ಯೋಗ ಅಧಿಕಾರಿ
Get access to question papers!
  Get Questions